ಹೊಳೆ ನರಸೀಪುರ: ಲಂಚ ಪಡೆಯುವಾಗ ಹಳ್ಳಿ ಮೈಸೂರು ನಾಡಕಚೇರಿ ಗ್ರಾಮ ಲೆಕ್ಕಾಧಿಕಾರಿ ರಮೇಶ್ ಲೋಕಾಯುಕ್ತ ಬಲೆಗೆ
ಹೊಳೆನರಸೀಪುರ : ಪೌತಿ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ನಾಡಕಚೇರಿ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಗ್ರಾಮ ಲೆಕ್ಕಾಧಿಕಾರಿ ರಮೇಶ್ ಇಂದು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದು, ಮುದ್ದೇಗೌಡ ಎಂಬುವವರ ಪೌತಿ ಖಾತೆ ಮಾಡಿಕೊಡುವ ನೆಪದಲ್ಲಿ ರಮೇಶ್ ಒಟ್ಟು 4000 ಲಂಚ ಕೇಳಿದ್ದಾನೆಂದು ತಿಳಿದುಬಂದಿದೆ. ಮೊದಲ ಹಂತದಲ್ಲಿ ಈಗಾಗಲೇ ₹1000 ಲಂಚದ ಹಣ ಪಡೆದಿದ್ದ ವಿಎ, ಇಂದು ನಾಡಕಚೇರಿಯಲ್ಲಿಯೇ ಉಳಿದ ₹3000 ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಲೆ ಬೀಸಿದ್ದಾರೆ..