ಶಿರಸಿ: ತಾಲೂಕಿನ ಗ್ರಾಮಾಂತರ ಭಾಗವಾದ ಸಾಲಕಣಿ ಕೆಳಾಸೆಯ ರಾಮಚಂದ್ರ ರಾಮೇ ಗೌಡ ಅವರು ಇತ್ತೀಚಿಗೆ ಕೃಷಿ ಕೆಲಸದಲ್ಲಿರುವಾಗ ಅಡಕೆ ಮರದಿಂದ ಬಿದ್ದು, ಮೃತರಾಗಿದ್ದು, ಅವರ ಮನೆಗೆ ಬುಧವಾರ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಧನ ಸಹಾಯ ಮಾಡಿದರು. ಅಡಕೆ ಕೊನೆ ಕೊಯ್ಯುವಾಗ ಮರ ಅರ್ಧಕ್ಕೆ ತುಂಡಾದ ಪರಿಣಾಮ ಮರದಿಂದ ಬಿದ್ದು ಮೃತರಾಗಿರುವುದು ದುರದೃಷ್ಟಕರವಾದ ಘಟನೆಯಾಗಿದೆ. ಕುಟುಂಬಕ್ಕೆ ಆಧಾರವಾಗಿರುವ ಯಜಮಾನ ಹೀಗೆ ದುರ್ಘಟನೆಗೆ ತುತ್ತಾಗಿದ್ದು ತೀವ್ರ ನೋವನ್ನುಂಟುಮಾಡಿದೆ.ಎಂದು ಸಂತಾಪ ಸೂಚಿಸಿದರು.