ಕಲಬುರಗಿ: ಫೀರೋಜಾಬಾದ ಬಳಿ ಟಿಟಿ ವಾಹನ ಪಲ್ಟಿ: ಬೀದರದಿಂದ ಉಡುಪಿ ಹೊರಟ್ಟಿದ್ದ ಪ್ರಯಾಣಿಕರಿಗೆ ಗಾಯ
ಟ್ರೂರ್ಸ್ ಆಂಡ್ ಟ್ರಾವಲ್ಸ್ ಟಿಟಿ ವಾಹನದಲ್ಲ ಬೀದರ ಜಿಲ್ಲೆಯ ಟಿ ಮರ್ಜಾಪುರ ಗ್ರಾಮದಿಂದ ಉಡುಪಿಗೆ ಪ್ರವಾಸ ಕೈಗೊಂಡ ವೇಳೆ ಕಲಬುರಗಿ ಹೊರವಲಯದ ಫೀರೋಜಾಬಾದ ಬಳಿ ನಿದ್ರೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 10 ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಇಂದು ಗುರುವಾರ ನಸುಕಿನ ಜಾವ 5-30 ರ ಸುಮಾರಿಗೆ ಘಟನೆ ನಡೆದಿದೆ. ವಾಹನ ಸಂಖ್ಯೆ ಟಿಎಸ್ 02 ಯುಡಿ 9622 ಸಂಖ್ಯೆಯ ವಾಹನ ಪಲ್ಟಿಯಾಗಿದೆ. ಗಾಯಾಳುಗಳನ್ನು ಅಂಬುಲೇನ್ಸ್ ಮುಲಕ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಂಭೀರಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಗೆ ಕಳಿಸಲಾಗಿದೆ. ಸದ್ಯ ಈ ಕುರಿತು ಕಲಬುರಗಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ...