ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಅವರ ಕೊಲೆ ಪ್ರಕರಣದ ಆರೋಪಿ ಅಶ್ವಥ್ಗೆ ಬೆಂಗಳೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ, ಬಸವರಾಜ ಮುತ್ತಗಿ ಅವರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿ, ಅಶ್ವಥ್ ಅವರ ಜಾಮೀನು ರದ್ದುಪಡಿಸುವಂತೆ ಹಾಗೂ ತಮಗೆ ರಕ್ಷಣೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮುತ್ತಗಿ ಅವರ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಾಲಯವು, ಅವರ ಸಾಕ್ಷ್ಯ ಮುಗಿಯುವವರೆಗೂ ಅಶ್ವಥ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಇದೀಗ ಬಸವರಾಜ ಮುತ್ತಗಿ ಅವರ ಸಾಕ್ಷ್ಯ ಮುಗಿದ ಹಿನ್ನೆಲೆಯಲ್ಲಿ, ಅಶ್ವಥ್ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.