ಕಲಬುರಗಿ: ಸುಭಾಷ್ ಗುತ್ತೇದಾರ್ರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ: ನಗರದಲ್ಲಿ ಪ್ರಣವಾನಂದ ಸ್ವಾಮೀಜಿ ಕಿಡಿ
ಆಳಂದ ಕ್ಷೇತ್ರದ ಮಾಜಿ ಶಾಸಕ ಹಾಗೂ ಈಡಿಗ ಸಮಾಜದ ಮುಖಂಡ ಸುಭಾಷ್ ಆರ್. ಗುತ್ತೇದಾರ್ ಅವರ ಮನೆ ಮೇಲೆ ರಾಜಕೀಯ ಷಡ್ಯಂತ್ರದ ಹಿನ್ನೆಲೆಯಲ್ಲೇ SIT ದಾಳಿ ನಡೆದಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿಗಳಾದ ಡಾ.ಪ್ರಣವಾನಂದ ಸ್ವಾಮೀಜಿಗಳು ಆರೋಪಿಸಿದ್ದಾರೆ. ಈ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದ ಸ್ವಾಮೀಜಿಗಳು,ರಾಜಕೀಯ ಪ್ರಯೋಜನಕ್ಕಾಗಿ SIT ದುರುಪಯೋಗವಾಗುತ್ತಿದೆ ಎಂದು ಹೇಳಿ, ದಾಳಿ ತಕ್ಷಣ ನಿಲ್ಲಿಸದಿದ್ದರೆ ಈಡಿಗ ಸಮಾಜದ ಜನತೆ ಬೀದಿಗಿಳಿದು ಹೋರಾಟ ಆರಂಭಿಸುವುದಾಗಿ ಭಾನುವಾರ 8 ಗಂಟೆಗೆ ಮಾತನಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ...