ಶಿವಮೊಗ್ಗ: ಪತಿ ಮನೆಯವರ ಕಿರುಕುಳಕ್ಕೆ ನವ ವಿವಾಹಿತ ಆತ್ಮಹತ್ಯೆ: ನಗರದಲ್ಲಿ ಪೋಷಕರ ಪ್ರತಿಭಟನೆ
ಭದ್ರಾವತಿಯ ಹಂಚಿನ ಸಿದ್ದಾಪುರ ಭದ್ರಾ ನಾಲೆಗೆ ಹಾರಿ ನವ ವಿವಾಹಿತೇ ಲತಾ ನಾಪತ್ತೆಯಾಗಿದ್ದರು ಆಕೆಯ ಮೃತ ದೇಹ ಸೂಳೆಕೆರೆ ಸಮೀಪದ ಕಾಲುವೆಯಲ್ಲಿ ಪತ್ತೆಯಾಗಿತ್ತು. ಗುರುವಾರ ಆಕೆಯ ಮೃತ ದೇಹದ ಮರಣೋತ್ತರ ಪರೀಕ್ಷೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಶವಗಾರದಲ್ಲಿ ನಡೆಸಲಾಗುತ್ತಿದ್ದು, ಮೃತ ಲತಾಳ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.ಕೂಡಲೇ ಆಕೆಯ ಪತಿ,ಅತ್ತೆ, ಮಾವ ಹಾಗೂ ಅಕ್ಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮೃತ ಲತಾಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.