ಯಲ್ಲಾಪುರ: ಲಕ್ಷ್ಮೇಶ್ವರ: ತೆಂಗಿನಗೇರಿ ಬಳಿ ಹಿಟ್ &ರನ್ ಕೇಸ್,ಅಪರಿಚಿತ ವ್ಯಕ್ತಿ ಸಾವು,ವಾರಸುದಾರರ ಪತ್ತೆಗೆ ಮನವಿ
ಯಲ್ಲಾಪುರ : ತಾಲೂಕಿನ ತೆಂಗಿನಗೇರಿ ಬಳಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಭಿಕ್ಷುಕ(೭೦) ಮೃತಪಟ್ಟ ಘಟನೆ ಸಂಭವಿಸಿದೆ. ತಾಲೂಕಿನ ತೆಂಗಿನಗೇರಿ ಬಳಿ ಅಪರಿಚಿತ ವಾಹನವೊಂದು ಗುದ್ದಿದ್ದರಿಂದ ಭಿಕ್ಷುಕನು ಗಂಭೀರ ಗಾಯಗೊಂಡಿದ್ದವನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಪರಿಚಿತ ಭಿಕ್ಷುಕ ಮೃತಪಟ್ಟಿದ್ದಾನೆ.ಅಪರಿಚಿತ ಭಿಕ್ಷುಕನ ಮಾಹಿತಿ ಕಲೆ ಹಾಕಲು ಪೊಲೀಸರು ಪ್ರಯತ್ನ ನಡೆಸಿದ್ದಾರೆ.ಅಪಘಾತಕ್ಕೆ ಕಾರಣವಾದ ವಾಹನ ಕುರಿತು ಮಾಹಿತಿ ಲಭ್ಯವಾಗಿಲ್ಲ.