ಯಲ್ಲಾಪುರ: ವಿಜೃಂಭಣೆಯಿಂದ ನಡೆದ ಕೋಟೆ ಕರಿಯಮ್ಮ ದೇವಸ್ಥಾನದ ವರ್ಧಂತಿ ಉತ್ಸವ ಹಾಗೂ ದೀಪೋತ್ಸವ
ಲ್ಲಾಪುರ: ಪಟ್ಟಣದ ಕೋಟೆ ಕರಿಯವ್ವ ದೇವಸ್ಥಾನದ ವರ್ಧಂತಿ ಉತ್ಸವ ಹಾಗೂ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ನವಚಂಡಿ ಹೋಮ ,ಶತಕಲಶಾಭೀಷೇಕ, ನಾಗಮೂಲಮಂತ್ರ ಹೋಮ, ರುದ್ರಾಭಿಷೇಕ, ನಾಗಕ್ಷೀರಾಭೀಷೇಕ, ನವಚಂಡಿ ಹೋಮ, ಮಹಾಪೂಜೆ ಕುಮಾರಿಕಾ ಪೂಜೆ . ಪೂರ್ಣಾಹುತಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಶ್ರೀದೇವಿಗೆ ಹಾಗೂ ಪರಿವಾರ ದೇವತೆಗಳಿಗೆ ವಿಶೇಷ ಪೂಜೆ ಬೆಳ್ಳಿ ಬಂಗಾರದ ಆಭರಣಗಳಿಂದ ಅಲಂಕರಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹಣ್ಣು ಕಾಯಿ ಉಡಿ ಸೇವೆ ಸಲ್ಲಿಸಿ,ಅನ್ನ ಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾದರು.