ಚಿಕ್ಕಬಳ್ಳಾಪುರ: ಕಾಂಗ್ರೆಸ್ ನವರು ವಾಮ ಮಾರ್ಗದಲ್ಲಿ ಗೆಲ್ಲುವುದರಲ್ಲಿ ನಿಸ್ಸೀಮರು:ನಗರದಲ್ಲಿ ಸಂಸದ ಡಾ.ಕೆ ಸುಧಾಕರ್
ಚುನಾವಣಾ ಅಕ್ರಮಕ್ಕೆ ಯಾರಾದರೂ ಪಿತಾಮಹ ಇದ್ದರೆ ಅದು ಕಾಂಗ್ರೆಸ್ ಪಕ್ಷ,ವಾಮಮಾರ್ಗಗಳಿಂದ ಚುನಾವಣೆ ಗೆಲ್ಲುವುದರಲ್ಲಿ ಕಾಂಗ್ರೆಸ್ ನವರು ಮೊದಲಿನಿಂದಲೂ ನಿಸ್ಸೀಮರು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ ಸುಧಾಕರ್ ಇಂದು ತಿಳಿಸಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಮಾನ್ಯ ಹೈಕೋರ್ಟ್ ನೀಡಿರುವ ತೀರ್ಪು ಅತ್ಯಂತ ಸ್ವಾಗತಾರ್ಹ. ಇದೇ ರೀತಿ ಅಕ್ರಮ ಇನ್ನೂ ಅನೇಕ ಕ್ಷೇತ್ರಗಳಲ್ಲಿ ನಡೆದಿರುವ ಬಗ್ಗೆ ಅನುಮಾನವಿದ್ದು ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.