ಭದ್ರಾವತಿ: ಭದ್ರಾವತಿಯ ಕೇಶವಾಪುರದ ಮನೆ ಒಂದರಲ್ಲಿ ಕಳ್ಳತನ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಲಾಕ್ ಮುರಿದು ಕಳ್ಳತನ ಮಾಡಲಾಗಿದೆ. ಕುಟುಂಬದವರು ಸಂಬಂಧಿಯ ಮದುವೆ ಸಮಾರಂಭ ಮುಗಿಸಿ ಹುಬ್ಬಳ್ಳಿಯಿಂದ ಭದ್ರಾವತಿಯ ಹೊಸಮನೆ ಬಡಾವಣೆಯ ಕೇಶವಾಪುರಕ್ಕೆ ಮರಳಿದಾಗ ವಿಷಯ ಬೆಳಕಿಗೆ ಬಂದಿದೆ. ಶಕೀಲ್ ಅಹಮದ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮೇ 18ರಂದು ಕುಟುಂಬದವರು ಹುಬ್ಬಳ್ಳಿಗೆ ತೆರಳಿದ್ದರು. ಮೇ 27ರಂದು ಮನೆಗೆ ಮರಳಿದಾಗ ಮುಂದಿನ ಬಾಗಿಲು ತೆರೆದಂತ್ತಿತ್ತು. ಒಳ ಹೋಗಿ ನೋಡಿದಾಗ ವಸ್ತುಗಳ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೀರುವಿನಲ್ಲಿದ್ದ 99 ಸಾವಿರ ರೂ. ಮೌಲ್ಯದ ಆಭರಣ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.