ಯಲ್ಲಾಪುರ : ನಮ್ಮ ತಾಲ್ಲೂಕಿನಲ್ಲಿ ಒಂದಕ್ಕಿಂತ ಒಂದು ವಿಜೃಂಭಣೆಯ ಕಲಿಕಾ ಹಬ್ಬಗಳು ನಡೆಯುತ್ತಿವೆ.ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಈ ಕಾರ್ಯಕ್ರಮ ಸಹಕಾರಿಯಾಗಲಿ ಎಂದು ದೈಹಿಕ್ಷ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ಹೇಳಿದರು. ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡೆಮನೆ ಯಲ್ಲಿ ಯಲ್ಲಾಪುರ 2 ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ,ಶಿಕ್ಷಣ ಇಲಾಖೆ ಅಧಿಕಾರಿಗಳು ಇತರರು ಇದ್ದರು.