ಬಳ್ಳಾರಿ: ತಾಲೂಕಿನ ಅಸುಂಡಿ ಯುವಕನ ಸಾವು ಪ್ರಕರಣ: ಕೊಲೆ ಎಂದು ಸಾಬೀತು
ತಾಲೂಕಿನಅಸುಂಡಿಗ್ರಾಮದ ರವಿ ಎಂಬ ಯುವಕನ ಅಸಹಜ ಸಾವು ಪ್ರಕರಣವು ಕೊಲೆ ಎಂದು ಖಚಿತವಾಗಿದ್ದು, ಒಟ್ಟು 10 ಆರೋಪಿಗಳನ್ನು ಪರಮದೇವನಹಳ್ಳಿ (ಪಿ.ಡಿ) ಪೊಲೀಸರು ಬಂಧಿಸಿದ್ದಾರೆ. ಅಸುಂಡಿ-ಗೋಡೆಹಾಳ್ ರಸ್ತೆಯಲ್ಲಿ ರವಿ ಮೃತದೇಹ ಗುರುವಾರ ರಾತ್ರಿ ಪತ್ತೆಯಾಗಿತ್ತು. ಆರೋಪಿಗಳು ಅಪಘಾತವೆಂಬಂತೆ ಸನ್ನಿವೇಶ ಸೃಷ್ಟಿ ಮಾಡಿದ್ದರು. ಆದರೆ, ಇದು ಕೊಲೆ ಎಂದು ಕುಟುಂಬಸ್ಥರು ಆರಂಭದಿಂದೂ ಪ್ರತಿಪಾದಿಸುತ್ತಲೇ ಬಂದಿದ್ದರು. ರವಿ ಹತ್ಯೆಗೀಡಾಗಿರುವುದಾಗಿ ಶವ ಪರೀಕ್ಷೆಯಿಂದ ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ತನಿಖೆ ನಡೆಸಿದಾಗ ಹತ್ತು ಆರೋಪಿಗಳು ಸಿಕ್ಕಿಬಿದ್ದಿದ್ದಾ-ರೆ. ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ ಸಂಜೆ 6ಗಂಟೆಗೆ ಮಾಹಿತಿ ನೀಡಿದ್ದಾರೆ ಈ ಕುರಿತು ಮಂಗಳವಾರ ಸಂಪೂರ್ಣ ಮಾಹಿತಿ ನೀಡುವುದಾಗಿ