ಶಿವಮೊಗ್ಗ: ನಗರದ ಗಾಂಧಿ ಬಜಾರನಲ್ಲಿ 67 ಸಾವಿರ ಮೌಲ್ಯದ ಚಿನ್ನದ ಸರ ಕಳವು; ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೆ ಹಿಂದಿನಿಂದ ಬಂದು ಬೆನ್ನು ತಟ್ಟಿ, ಕೈಗೆ ಏನೋ ಸವರಿ ಬಂಗಾರದ ಸರ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಗೋಪಾಳದ ಶಾಂತಾ ಜವಾಹರ ಎಂಬುವವರು ಗಾಂಧಿ ಬಜಾರ್‌ನಲ್ಲಿ ನಡೆದು ಹೋಗುತ್ತಿದ್ದಾಗ ಹಿಂಬದಿಯಿಂದ ಇಬ್ಬರು ಮಹಿಳೆಯರು ಬಂದು ಬೆನ್ನು ತಟ್ಟಿದ್ದಾರೆ. ಶಾಂತಾ ಅವರು ತಿರುಗುತ್ತಿದ್ದಂತೆ ಕೈಗೆ ಏನೋ ಸವರಿದ್ದಾರೆ ಎಂದು ಆರೋಪಿಸಲಾಗಿದೆ. ಶಾಂತಾ ಅವರಿಗೆ ಮಂಕು ಕವಿದಂತಾಗಿದ್ದು, ಆ ಮಹಿಳೆಯರು ಹೇಳಿದಂತೆ ತಮ್ಮ ಕೊರಳಲ್ಲಿದ್ದ ಬಂಗಾರದ ಸರ ಬಿಚ್ಚಿ ಕೊಟ್ಟಿದ್ದಾರೆ. ಎರಡು ದಿನವಾದರೂ ಮಂಕು ಕವಿದಂತಹ ಪರಿಸ್ಥಿತಿ ಇತ್ತು. ಆ ಬಳಿಕ ಚೇತರಿಸಿಕೊಂಡು ಕುಟುಂಬದವರಿಗೆ ವಿಚಾರ ತಿಳಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.