ಚಿಂಚೋಳಿ: ಐನಾಪುರ ಗ್ರಾಮದಲ್ಲಿ ವಿಚಿತ್ರ ಸದ್ದಿಗೆ ಬೆಚ್ಚಿಬಿದ್ದ ಗ್ರಾಮಸ್ಥರು
ಭೂಮಿಯಿಂದ ಗರ್ ಗರ್ ಎಂಬ ವಿಚಿತ್ರ ಸದ್ದು ಕೇಳಿ ಬಂದಿರುವ ಘಟನೆ ಚಿಂಚೋಳಿ ತಾಲೂಕಿನ ಐನಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕೇಳಿ ಬಂದಿದೆ ಎಂದು ಮಾಹಿತಿ ಲಭ್ಯವಾಗಿದೆ. ಶುಕ್ರವಾರ ನಸುಕಿನ ಜಾವ 5.47 ನಿಮಿಷಕ್ಕೆ ಶಬ್ದ ಕೇಳಿ ಬಂದಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಭೂಕಂಪ ಆಗಿರಬಹುದೆಂದು ಸ್ಥಳಿಯರು ಆತಂಕದಲ್ಲಿದ್ದಾರೆ. ಸದ್ಯ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆಂದು ಶುಕ್ರವಾರ 6 ಗಂಟೆಗೆ ಮಾಹಿತಿ ಲಭ್ಯವಾಗಿದೆ...