ಯಲ್ಲಾಪುರ: ಎಪಿಎಂಸಿ ಬಳಿ ಕಾರ್ ಹಾಗೂ ಪೊಲೀಸ್ ವಾಹನ ಡಿಕ್ಕಿ,ಪ್ರಾಣಾಪಾಯದಿಂದ ಪಾರು
ಯಲ್ಲಾಪುರ: ಪಟ್ಟಣದ ಎಪಿಎಂಸಿ ಬಳಿ ಕಾರ್ ಹಾಗೂ ಪೊಲೀಸ್ ವಾಹನ ಡಿಕ್ಕಿಯಾಗಿ ಅಪಘಾತವಾಗಿದೆ. ಅಪಘಾತದ ರಭಸಕ್ಕೆ ಡಿಕ್ಕಿಯಾಗಿರುವ ವಾಹನಗಳಲ್ಲಿದ್ದ ಏರ್ಬ್ಯಾಗ್ ತೆರೆದಿದ್ದು, ವಾಹನದಲ್ಲಿದ್ದವರು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.ಯಲ್ಲಾಪುರ ಪಟ್ಟಣದಿಂದ ಶಿರಸಿ ಮಾರ್ಗವಾಗಿ ಬಂದ ಕಾರೊಂದು ಎಪಿಎಂಸಿ ಕಡೆ ಟರ್ನ ಹೊಡೆದಿದ್ದರಿಂದ ವೇಗವಾಗಿದ್ದ ಪೊಲೀಸರ ವಾಹನ ಆ ಕಾರಿಗೆ ಡಿಕ್ಕಿಯಾದ ತಕ್ಷಣ ಆ ಕಾರು ಹಾಗೂ ಪೊಲೀಸ್ ವಾಹನದ ಏರ್ಬ್ಯಾಗ್ ತೆರೆದಿದ್ದರಿಂದ ಎರಡು ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.