ಶಿರಸಿ: ಧರ್ಮಾಚರಣೆಯು ನಮ್ಮೊಳಗಿರುವ ಶಕ್ತಿಯನ್ನು ಬೆಳೆಸುತ್ತವೆ, ಉಳಿಸುತ್ತವೆ: ಸ್ವರ್ಣವಲ್ಲೀಯಲ್ಲಿ ಗಂಗಾಧರೇಂದ್ರ ಶ್ರೀ
ಶಿರಸಿ: ನಮ್ಮ ಎಲ್ಲ ವಿಧದ ಧರ್ಮಾಚರಣೆಗಳು ನಮಗೆ ಅದ್ಭುತ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು. ಉಭಯ ಶ್ರೀಗಳವರ ಚಾತುರ್ಮಾಸ್ಯ ವ್ರತಾಚರಣೆಯ ಹಿನ್ನೆಲೆಯಲ್ಲಿ ಶಿರಸಿ ಸೀಮೆ ತೋರಣಸಿ ಭಾಗಿ, ತೆರಕನಹಳ್ಳಿ ಭಾಗಿ ಹಾಗೂ ಶಿರಸಿ ಸೀಮಾ ತುಂಡುಗ್ರಾಮದ ಸಮಸ್ತ ಶಿಷ್ಯರು ಸೇವೆ ಸಲ್ಲಿಸಿದರು. ಉಭಯ ಶ್ರೀಗಳ ಪಾದುಕಾ ಪೂಜೆ, ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನುಡಿದರು. ಧರ್ಮಾಚರಣೆಗಳು ನಮ್ಮ ಒಳಗೆ ಸಹಜವಾಗಿ ಇರುವ ಶಕ್ತಿಗಳನ್ನು ಉಳಿಸುತ್ತವೆ ಮತ್ತು ಬೆಳೆಸುತ್ತದೆ ಅದೇ ನಾವು ಸಾಂಸಾರಿಕವಾದ ಚಟುವಟಿಕೆಗಳನ್ನು ತೊಡಗಿದಾಗ ಈ ಶಕ್ತಿಗಳು ಕಮ್ಮಿಯಾಗುತ್ತವೆ ಎಂದರು.