ಅಜ್ಜಂಪುರ: ಭಿಕ್ಷೆ ಎತ್ತಿ ರಾಜ್ಯ ಸರ್ಕಾರಕ್ಕೆ ಹಣ ನೀಡಿದ ಅಜ್ಜಂಪುರದ ದಲಿತ ಸಂಘಟನೆಗಳು, ಕಾರಣ?
ಅಜ್ಜಂಪುರ ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಕೂರಲು ಕುರ್ಚಿಗಳಿಲ್ಲ ಪ್ರತಿನಿತ್ಯ ನೂರಾರು ಜನರು ವಿವಿಧ ಕಾರ್ಯಗಳಿಗೆ ತಾಲೂಕು ಕಚೇರಿಗೆ ಬರುತ್ತಾರೆ ಅದರಲ್ಲೂ ಮಹಿಳೆಯರು ವಯಸ್ಕರಿಗೆ ತೊಂದರೆಯಾಗುತ್ತಿದೆ ಎಂದು ಶನಿವಾರ ಮಧ್ಯಾಹ್ನ 4 ಗೆ ದಲಿತಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಭಿಕ್ಷೆ ಎತ್ತಿ ತಾಲೂಕು ಕಚೇರಿಗೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅಜ್ಜಂಪುರ ಪಟ್ಟಣದ ಬಸ್ ನಿಲ್ದಾಣ, ಬಿ.ಹೆಚ್.ರಸ್ತೆ, ಅಂಗಡಿ, ಹೋಟೆಲ್ ಗಳಲ್ಲಿ ಸಂಘಟನೆಯ ಸದಸ್ಯರು ಜನರಿಂದ ಭಿಕ್ಷೆ ಎತ್ತಿದ್ದಾರೆ. ಮಳೆ ಸುರಿಯುತ್ತಿದ್ದರೂ ಬೀದಿ-ಬೀದಿ ತಿರುಗಿ ₹3500 ಭಿಕ್ಷೆ ಸಂಗ್ರಹಿಸಿ ಅದರಲ್ಲಿ ₹2500 ರೂ. ವೆಚ್ಚದಲ್ಲಿ 8 ಚೇರ್ಗಳನ್ನು ತಾಲ್ಲೂಕು ಕಚೇರಿಗೆ ಕೊಡುಗೆಯಾಗಿ ನೀಡಿದ್ದಾರೆ. ಉಳಿದ ಸಾವಿರ ರೂ. ಹಣವನ್ನು “ಸರ್ಕಾರ