ಭದ್ರಾವತಿ: ಗಾಂಜಾ ವಶ, ಹೊಳೆಹೊನ್ನೂರು ಪೊಲೀಸರಿಂದ ಇಬ್ಬರ ಬಂಧನ
ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಬೈಪಾಸ್ ರಸ್ತೆಯ ಭದ್ರಾ ನದಿ ಸೇತುವೆ ಮೇಲೆ ಗಾಂಜಾ ಮಾರುತ್ತಿದ ಇಬ್ಬರು ಆರೋಪಿಗಳನ್ನು ಪೊಲೀಸರು ಶನಿವಾರ ಬೆಳಿಗ್ಗೆ 7 ಗಂಟೆಗೆ ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ ಶಫಿ ಉಲ್ಲಾ (43) ಮತ್ತು ಗಿರೀಶ್ (50) ಬಂಧಿತರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್ಐ ರಮೇಶ್ ನೇತೃತ್ವದ ತಂಡ ಬೈಪಾಸ್ ಸೇತುವೆ ಮೇಲೆ ಸ್ಕೂಟಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ. ಆರೋಪಿಗಳಿಂದ ಅಂದಾಜು 50,000 ಮೌಲ್ಯದ ಒಂದು ಕೆ.ಜಿ ಗಾಂಜಾ ಹಾಗೂ ಒಂದು ಸ್ಕೂಟಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.