ಸಂಡೂರು: ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಕಾರಿಗೆ ಲಾರಿ ಢಿಕ್ಕಿ
Sandur, Ballari | Nov 18, 2025 ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ MT ಗೇಟ್ ಹತ್ತಿರ ಶಿಫ್ಟ್ ಕಾರಿಗೆ ಲಾರಿಯೊಂದು ಢಿಕ್ಕಿ ಹೊಡೆದ ಘಟನೆ ನ.17,ಸೋಮವಾರ ಸಂಜೆ 5ಗಂಟೆಗೆ ಸಂಭವಿಸಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಈ ವೀಡಿಯೋವನ್ನು ವಾಹನ ಸವಾರನೊಬ್ಬ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ. ಘಟನಾ ಸ್ಥಳಕ್ಕೆ ಸ್ಥಳೀಯರು ಧಾವಿಸಿ ನೆರವು ನೀಡಿದ್ದಾರೆ. ಕಾರಿಗೆ ಭಾಗಶಃ ಹಾನಿಯಾಗಿದ್ದು, ಚಾಲಕ ಲಘು ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.