ಶಿವಮೊಗ್ಗ: ಗೃಹೋಪಯೋಗಿ ವಸ್ತುಗಳ ಲೋಡ್ ಇಳಿಸಿ ವಾಪಸ್ಸು ಬರುವಾಗ ಅಪಘಾತವಾಗಿದೆ, ಶಿವಮೊಗ್ಗದಲ್ಲಿ ವಾಹನ ಮಾಲೀಕ ಸಾದಿಕ್ ಪಾಷ
ಶಿವಮೊಗ್ಗ ತಾಲೂಕಿನ ಗೋಂಧಿ ಚಟ್ನಳ್ಳಿ ಬಳಿ ಭೀಕರ ಅಪಘಾತ ಸಂಭವಿಸಿ ಮೂವರು ಕಾರ್ಮಿಕರು ಸಾವನಪ್ಪಿದ್ದಾರೆ. ಈ ಸಂಬಂಧ ವಾಹನ ಮಾಲೀಕ ಸಾದಿಕ್ ಪಾಷಾ ಗುರುವಾರ ಸಂಜೆ 5 ಗಂಟೆಗೆ ಪ್ರತಿಕ್ರಿಯೆ ನೀಡಿದ್ದು ನಮ್ಮ ನಾಲ್ವರು ಕಾರ್ಮಿಕರು ಗೃಹೋಪಯೋಗಿ ವಸ್ತುಗಳನ್ನ ಕೊಪ್ಪಗೆ ಡೆಲಿವೆರಿ ಮಾಡಿ ವಾಪಸ್ಸು ಮನೆಗೆ ತೆರಳುವಾಗ ಅಪಘಾತವಾಗಿದೆ, ಕಳೆದ ರಾತ್ರಿ ಕೊಪ್ಪ ತಲುಪಿರುವುದಾಗಿ ಕಾರ್ಮಿಕರು ತಿಳಿಸಿದರು. ನಂತರ ಕರೆ ಸ್ವೀಕರಿರಲಿಲ್ಲ ನೋಡಿದ್ರೆ ಬೆಳಗಿನ ಜಾವ ಅಪಘಾತವಾಗಿ ಮೂವರು ಕಾರ್ಮಿಕರು ಗೋಂದಿ ಚಟ್ನಳ್ಳಿ ಗ್ರಾಮದ ಸಮೀಪ ಸ್ಥಳದಲ್ಲೇ ಮೃತಪಟ್ಟಿದ್ದು ಚಾಲಕ ಅದೃಷ್ಟವಶಾತ್ ಪಾರಾಗಿದ್ದಾನೆ ಎಂದು ತಿಳಿಸಿದ್ದಾರೆ