ಹುಬ್ಬಳ್ಳಿ:, ಯಾತ್ರಿ ಆ್ಯಪ್ ಬಳಸಿ ಆಟೊದಲ್ಲಿ ಪ್ರಯಾಣಿಕರನ್ನು ಕರೆದೊಯ್ದಿದ್ದಕ್ಕೆ ಇಲ್ಲಿನ ಶ್ರೀನಗರದ ಶಾಕಿರ್ ಎಸ್., ಅವರ ಮೇಲೆ ಇಬ್ಬರು ಕಲ್ಲಿನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಕುರಿತು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಕ್ಷಯ ಪಾರ್ಕ್ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದ್ದು, ಆನಂದ ನಗರದ ಲತೀಫ್ ಮತ್ತು ಸೋಹೆಲ್ ವಿರುದ್ಧ ಆಟೊ ಚಾಲಕ ಶಾಕಿರ್ ದೂರು ನೀಡಿದ್ದಾರೆ. ಇನಾರ್ಬಿಟ್ ಮಾಲ್ನಿಂದ ಅಕ್ಷಯ ಕಾಲೊನಿಗೆ ಯಾತ್ರಿ ಆ್ಯಪ್ ಬಳಸಿ ಪ್ರಯಾಣಿಕರನ್ನು ಕರೆದೊಯ್ಯುವಾಗ ಆರೋಪಿಗಳು ತಂಟೆ ತೆಗೆದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.