ಶಿವಮೊಗ್ಗ: ಶಿವಮೊಗ್ಗದ ವನ್ಯಜೀವಿ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಪ್ರತ್ಯೇಕ ಕೇಡರ್ ಪ್ರಸ್ತಾವನೆ ಸಲ್ಲಿಸಿ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ
ಹುಲಿ ಮತ್ತು ಕಾಡಾನೆಗಳು ನಾಡಿನತ್ತ ಬರುತ್ತಿದ್ದು. ಈ ವನ್ಯಜೀವಿಗಳ ಸೆರೆ ಕಾರ್ಯಾಚರಣೆ ವೇಳೆ ಅರವಳಿಕೆ ಚುಚ್ಚುಮದ್ದು ನೀಡಲೂ ವೈದ್ಯರ ಕೊರತೆ ಇದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಕೇಡರ್ ರೂಪಿಸಿ ವನ್ಯಜೀವಿ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಅಗತ್ಯ ಇದ್ದು. ತಜ್ಞ ವನ್ಯಜೀವಿ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸ್ಪಷ್ಟ ರೂಪರೇಶೆಯೊಂದಿಗೆ ಪ್ರತ್ಯೇಕ ಕೇಡರ್ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಲು ಸೂಚಿಸಿ ಗುರುವಾರ ಸಂಜೆ 5 ಗಂಟೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ ಹೊರಡಿಸಿದ್ದಾರೆ.