ಶಿರಸಿ: ತಾಲ್ಲೂಕಿಗೆ ಖಾಯಂ ತಹಶೀಲ್ದಾರ್ ನೇಮಕಕ್ಕೆ ಆಗ್ರಹಿಸಿ ಜೂ.23ಕ್ಕೆ ಕಾರವಾರ ಚಲೋ: ಪಟ್ಟಣದಲ್ಲಿ ಹೋರಾಟಗಾರ ಅನಂತಮೂರ್ತಿ
ಶಿರಸಿ: ಕಳೆದ ೪ ತಿಂಗಳಿನಿಂದ ತಹಸೀಲ್ದಾರ ಹುದ್ದೆ ಖಾಲಿ ಇದ್ದರೂ ಜನಪ್ರತಿನಿಧಿಗಳು ಗಮನವಹಿಸುತ್ತಿಲ್ಲ. ಇದರಿಂದ ಸಾರ್ವಜನಿಕರ ಕೆಲಸ ಕುಂಠಿತವಾಗಿದೆ. ತಕ್ಷಣ ಶಿರಸಿಗೆ ಖಾಯಂ ತಹಸೀಲ್ದಾರರನ್ನು ನೇಮಕಗೊಳಿಸಬೇಕು ಎಂದು ಅನಂತಮೂರ್ತಿ ಹೆಗಡೆ ಆಗ್ರಹಿಸಿದರು. ಅವರು ಮಂಗಳವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯನಿರ್ವಹಿಸುತ್ತಿದ್ದ ತಹಸೀಲ್ದಾರ ಶ್ರೀಧರ ಮುಂದಲಮನಿ ಅವರನ್ನು ಮಾ.೧೧ ರಂದು ವರ್ಗಾವಣೆಗೊಳಿಸಿ, ಆಡಳಿತದ ಹಿತದೃಷ್ಟಿಯಿಂದ ಡಾಂಡೇಲಿ ತಹಸೀಲ್ದಾರ ಶೈಲೇಶ ಪರಮಾನಂದ ಅವರಿಗೆ ಶಿರಸಿ ತಾಲೂಕಾ ತಹಸೀಲ್ದಾರರಾಗಿ ತಾತ್ಕಾಲಿಕವಾಗಿ ಅಧಿಕಾರ ನೀಡುತ್ತಾರೆ. ನಂತರ ಎ ೧೯ ರಂದು ಮುಂಡಗೋಡಿನ ತಹಸೀಲ್ದಾರ ಶಂಕರ ಗೌಂಡಿ ಅವರಿಗೆ ಅಧಿಕಾರ ನೀಡುತ್ತಾರೆ ಎಂದರು.