ಜೇವರ್ಗಿ: ಇಜೇರಿ ಗ್ರಾಮದಲ್ಲಿ ಕೋಮು ಸೃಷ್ಠಿ ಕೃತ್ಯ, ಟಿಪ್ಪು ಸುಲ್ತಾನ್ ಸಮಿತಿಯಿಂದ ದೂರು
ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಕೆಲ ಕಿಡಿಗೇಡಿಗಳು ಮುಸ್ಲಿಂಗಳ ಪವಿತ್ರ ಸ್ಥಳ ಮಕ್ಕಾ ಕಾಬಾ ಮೇಲೆ ಮೋದಿ ಮತ್ತು ಯೋಗಿ ಅವರ ಫೋಟೋ ಅಂಟಿಸಿ ಅವಹೇಳನಕಾರಿ ಬರಹ ಬರೆದಿದ್ದಾರೆ. ಈ ಕೃತ್ಯದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಟಿಪ್ಪು ಸುಲ್ತಾನ್ ಸಮಿತಿ ಅಧ್ಯಕ್ಷ ಮೊಹಿಯುದ್ದೀನ್ ಇನಾಂದಾರ್ ಆರೋಪಿಸಿದ್ದು, ಇವರ ನೇತೃತ್ವದಲ್ಲಿ ಯುವಕರು ಜೇವರ್ಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಕಾನೂನು ಕ್ರಮಕ್ಕೆ ಮನವಿ ಸಲ್ಲಿಸಿದರು. ಎಸ್ಪಿ ಅವರು ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ. ಸದ್ಯ ಎಫ್ ಐಆರ್ ದಾಖಲಾಗಿದ್ದು ತನಿಖೆ ನಡೆದಿದೆ.