ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರ ನ್ಯೂ ಕನ್ಯಾನಗರದಲ್ಲಿ ಮನೆಮಲಗಿದ್ದ ವೇಳೆ ಕಳ್ಳರು 2,45 ಲಕ್ಷ ಮೌಲ್ಯದ ಆಭರಣ, 20 ಸಾವಿರ ನಗದು ಕಳ್ಳತನ ಮಾಡಿರುವ ಘಟನೆ ನಡೆದಿದೆ.ನಗರದ ಡೇವಿಡ್ ಜೊನ್ನಲಗಡ್ಡ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಮನೆಯ ಬಾಗಿಲ ಲಾಕ್ನ್ನು ಸರಿಯಾಗಿ ಮಾಡದೇ ಮಲಗಿಕೊಂಡಿದ್ದಾಗ ಕಳ್ಳರು ಒಳಗೆ ಹೋಗಿ ಬೆಡ್ರೂಂನಲ್ಲಿದ್ದ 50 ಗ್ರಾಂ ತೂಕದ ಬಂಗಾರ, 20 ಸಾವಿರ ನಗದು ಸೇರಿ ಒಟ್ಟು 2.45 ಲಕ್ಷ ಕಿಮ್ಮತ್ತಿನ ಆಭರಣಗಳನ್ನು ಮಾಡಿಕೊಂಡು ಹೋಗಿದ್ದಾರೆ ಕಳ್ಳತನ ಎಂದು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.