ಇದ್ದಿಲು ನಾಗೇನಹಳ್ಳಿ ಬಳಿಯ ಇಟ್ಟಿಗೆ ಫ್ಯಾಕ್ಟರಿ ಸಮೀಪ ಈಚರ್ ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಬಂವಿಸಿ, ಸ್ಥಳದಲ್ಲೇ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಇದ್ದಿಲು ನಾಗೇನಹಳ್ಳಿ ಸಮೀಪ ಜರುಗಿದೆ. ಘಟನೆಯಲ್ಲಿ ಹಿರಿಯೂರು ಮೂಲದ ಕೊಟ್ಟಿಗೆ ಗ್ರಾಮದ ವಿಶಾಲ್ (24), ಯಶ್ವಂತ್ (22), ನಂಜುಂಡ(22) ರಾಹುಲ್ (19) ಮೃತ ದುರ್ದೈವಿಗಳು ಎನ್ನಲಾಗಿದೆ. ಮತ್ತೋಡು ಗ್ರಾಮಕ್ಕೆ ಸ್ನೇಹಿತನಿಗೆ ಡ್ರಾಪ್ ನೀಡಿ, ವಾಪಸ್ ಬರುವಾಗ ದುರ್ಘಟನೆ ನಡೆದಿದೆ. ಹಿರಿಯೂರು ಕಡೆಯಿಂದ ಹುಳಿಯಾರು ಕಡೆ ಹೋಗುತ್ತಿದ್ದ ಲಾರಿ, ಹಿರಿಯೂರು ಕಡೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.