ಕಲಬುರಗಿ: ಮಾದನಹಿಪ್ಪರಗಿ ಗಂಗಾಮಾತೆಗೆ ಶಾಸಕರಿಂದ ಭಕ್ತಿಪೂರ್ಣ ಬಾಗಿನ ಅರ್ಪಣೆ
ಮಾದನಹಿಪ್ಪರಗಿ ಗ್ರಾಮದ ಕೆರೆಯಲ್ಲಿ ಇಂದು ಧಾರ್ಮಿಕ ಸಂಭ್ರಮದ ವಾತಾವರಣ ನಿರ್ಮಾಣವಾಯಿತು. ಶಾಸಕ ಬಿ.ಆರ್. ಪಾಟೀಲ್ ಅವರು ಗ್ರಾಮಸ್ಥರೊಂದಿಗೆ ಸೇರಿ ಪರಮ ಪೂಜ್ಯ ಅಭಿನವ ಶಿವಲಿಂಗ ಮಹಾಸ್ವಾಮಿಗಳ ಸಮ್ಮುಖದಲ್ಲಿ ಗಂಗಾಮಾತೆಗೆ ಬಾಗಿನ ಅರ್ಪಿಸಿದರು. ಮಂಗಳವಾರ ನಾಲ್ಕು ಗಂಟೆಗೆ ಈ ಸಂಭ್ರಮ ಜರಗಿತು. ಗ್ರಾಪಂ ಸದಸ್ಯರು, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಗಂಗೆಯ ಮಹಿಮೆ ಕುರಿತು ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ನಾಮಸ್ಮರಣೆಯೊಂದಿಗೆ ಭಕ್ತರು ಭಾಗವಹಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಪೂಜೆ ಸಲ್ಲಿಸಿದರು..