ಬೇಲೂರು: ಮಲಸಾವರ ಗ್ರಾಮದಲ್ಲಿ ರಾತ್ರೋರಾತ್ರಿ ಗ್ರಾಮದ ಒಳಕ್ಕೆ ಲಗ್ಗೆ ಇಟ್ಟ ಕಾಡಾನೆ: ಗ್ರಾಮಸ್ಥರಲ್ಲಿ ಆತಂಕ
Belur, Hassan | Sep 17, 2025 ಬೇಲೂರು ತಾಲೂಕು ಮಲೆನಾಡು ಭಾಗದ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಮಲಸಾವರ ಗ್ರಾಮದಲ್ಲಿ ಕಳೆದ ರಾತ್ರಿ ಆನೆಗಳ ಹಿಂಡೊಂದು ನುಗ್ಗಿ ಗ್ರಾಮದಲ್ಲಿ ಓಡಾಡಿದ ಘಟನೆ ಆತಂಕಕ್ಕೆ ಕಾರಣವಾಗಿದೆ.ರಾತ್ರಿ ಹೊತ್ತು ಹಠಾತ್ವಾಗಿ ಗ್ರಾಮಾಂತರ ಪ್ರದೇಶಕ್ಕೆ ಬಂದ ಆನೆಗಳು ಹೊಲ ಜಮೀನು ಹಾಗೂ ತೋಟಗಳ ದಾರಿ ಹಿಡಿದು ಹಾನಿ ಮಾಡಬಹುದೆಂಬ ಭಯದಿಂದ ಗ್ರಾಮಸ್ಥರು ಮನೆಬಾಗಿಲು ಬೀಗ ಹಾಕಿಕೊಂಡು ನಿದ್ದೆಯಿಲ್ಲದ ರಾತ್ರಿ ಕಳೆಯಬೇಕಾಯಿತು.“ಪ್ರತಿ ರಾತ್ರಿ ಆನೆಗಳ ಚಲನವಲನ ಹೆಚ್ಚುತ್ತಿದೆ. ಹೊಲದಲ್ಲಿ ಬೆಳೆದಿರುವ ಬೆಳೆಗಳು ನಾಶವಾಗುವ ಪರಿಸ್ಥಿತಿ ಬಂದಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಆನೆಗಳನ್ನು ಹಿಮ್ಮೆಟ್ಟಿಸದಿದ್ದರೆ ಗ್ರಾಮಸ್ಥರಿಗೆ ಬದುಕು ಕಷ್ಟವಾಗುತ್ತದೆ” ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದರು.