ಬೆಂಗಳೂರು ಉತ್ತರ: ಧರ್ಮಸ್ಥಳ ಪ್ರಕರಣ; ಇಲ್ಲಿವರೆಗೂ ಏನು ದೊರಕಿಲ್ಲ: ನಗರದಲ್ಲಿ ಸಚಿವ ದಿನೇಶ್ ಗುಂಡೂರಾವ್
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ವಿಧಾನಸೌಧದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಉಸ್ತುವಾರಿ ಹಾಗೂ ಸಚಿವ ದಿನೇಶ್ ಗುಂಡೂರಾವ್ ಅವರು, ಕೋರ್ಟ್ ಆದೇಶದ ಹಿನ್ನೆಲೆ ಅನಾಮಿಕ ವ್ಯಕ್ತಿ, ಹೇಳಿದ ಸ್ಥಳ ನೋಡಿ ಆಗಿದೆ. ಧರ್ಮಸ್ಥಳ ವಿರುದ್ಧವಾಗಿ ಪ್ರಚಾರ ಆಗಿತ್ತು. ದೇಶದ ಮಟ್ಟಕ್ಕೆ ಹೋಗುವಂತೆ ಘಟನೆಯನ್ನ ವೈಭವೀಕರಿಸಿದ್ರು. ಅನೇಕ ಗಣ್ಯರು, ಸಂಘಟನೆಗಳು ಭಯಾನಕ ರೀತಿ ನಡೆದಿದೆ ಅಂತ ಹೇಳಿದ್ರು. ಧರ್ಮಸ್ಥಳ ಅವರೂ SIT ಆಗಲಿ ಅಂತ ಹೇಳಿದ್ರು. ನಮ್ಮ ಸರ್ಕಾರ ಕಾನೂನು ರೀತಿ ತೆಗೆದುಕೊಂಡು ಹೋದೆವು. ಈವರೆಗೂ ಏನೂ ಅಂತದ್ದು ದೊರಕಿಲ್ಲ. ಯಾಕೆ ಇವರು ವೈಭವೀಕರಿಸಿದ್ರು ಗೊತ್ತಿಲ್ಲ ಎಂದರು.