ಭದ್ರಾವತಿ: ಚೀಟಿ ಹಣ ತರಲು ಹೋದವನು ನಾಪತ್ತೆ, ಭದ್ರಾವತಿ ಹಳೇ ನಗರ ಠಾಣೆಯಲ್ಲಿ ಕೇಸ್ ದಾಖಲು
ಚೀಟಿ ಹಣ ವಸೂಲಿಗೆ ತೆರಳಿದ್ದ ಯುವಕ ನಾಪತ್ತೆಯಾಗಿದ್ದಾನೆ. 26 ವರ್ಷದ ಸತೀಶ್ ಎಂಬಾತ ಚೀಟಿ ಹಣ ಪಡೆದುಕೊಂಡು ಬರುತ್ತೇನೆ ಎಂದು ಮಂಜುನಾಥ್ ಎಂಬುವರ ಜೊತೆ ಮನೆಯಿಂದ ಹೋದವನು ಎರಡು ದಿನವಾದರೂ ಮನೆಗೆ ವಾಪಾಸಾಗಿಲ್ಲ. ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿ ನಗರದ 1 ನೇ ತಿರುವಿನಲ್ಲಿವ ಸತೀಶ್ ಮನೆಯಿಂದ ಹೊರಹೋಗಿದ್ದಾನೆ. ಸತೀಶ್ 5 ಅಡಿ ಎತ್ತರವಿದ್ದು ಗುಂಡು ಮುಖ ಹೊಂದಿದ್ದಾನೆ. ಕೈಮೇಲೆ ಉಷಾ ಎಂಬ ಹಚ್ಚೆ ಹಾಕಿಸಿಕೊಂಡಿದ್ದಾನೆ. ಹಳೆನಗರದ ಪೊಲೀಸ್ ಠಾಣೆಯಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಗೆ ಪ್ರಕರಣ ದಾಖಲಾಗಿದೆ. ಯುವಕನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಹಳೆ ನಗರ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.