ಆನೇಕಲ್: ನಜ್ಜು ಗುಜ್ಜಾದ ಕಾರಿನ ಮುಂಭಾಗ! ಚಂದಾಪುರದಲ್ಲಿ ಬಿಎಂಟಿಸಿ & ಓಮಿನಿ ಕಾರಿನ ಮಧ್ಯೆ ಭೀಕರ ಅಪಘಾತ!
ಸೆಪ್ಟೆಂಬರ್ 17 ರಾತ್ರಿ 8:45ರ ಹೊತ್ತಿಗೆ ಬಿಎಂಟಿಸಿ ಮತ್ತು ಓಮಿನಿ ಕಾರಿನ ಮಧ್ಯೆ ಭೀಕರ ಅಪಘಾತ ಉಂಟಾಗಿದೆ. ಚಂದಾಪುರದಲ್ಲಿ ನಡೆದಿರುವಂತಹ ಅಪಘಾತ ಇದಾಗಿದ್ದು ಈ ಘಟನೆಯಲ್ಲಿ ಯಾರ ತಪ್ಪು ಅನ್ನುವಂಥದ್ದು ಇದುವರೆಗೂ ಗೊತ್ತಾಗಿಲ್ಲ. ಮೇಲ್ನೋಟಕ್ಕೆ ಬಿಎಂಟಿಸಿ ಚಾಲಕನ ತಪ್ಪು ಅಂತ ಹೇಳಲಾಗುತ್ತಿದ್ದು ಓಮಿನಿ ಕಾರಿನ ಮುಂಭಾಗ ಮಾತ್ರ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸಡನ್ನಾಗಿ ಬ್ರೇಕ್ ಹಾಕಿರುವಂತಹ ಕಾರಣ ಬಿಎಂಟಿಸಿ ಪ್ರಯಾಣಿಕರಿಗೂ ಕೂಡ ಕೊಂಚ ಪೆಟ್ಟಾಗಿದೆ