ಚಿತ್ರದುರ್ಗದ ಐತಿಹಾಸಿಕ ವೀರ ಪುರುಷ ಮದಕರಿ ನಾಯಕರ ಭಾವಚಿತ್ರವನ್ನ ಹಿರಿಯೂರು ಮೂಲದ ಯುವಕ ಪ್ರಸನ್ನ ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಅವರಿಗೆ ಗಿಪ್ಟ್ ನೀಡಿದ್ದಾರೆ. ಚಿತ್ರದುರ್ಗದ ಆರ್ಟಿಸ್ಟ್ ನಾಗು ಆರ್ಟ್ಸ್ ಅವರು ಪೇಂಟಿಂಗ್ ನಲ್ಲಿ ತಮ್ಮ ಕೈಚಳ ತೋರಿದ್ದರು. ಈ ಭಾವಚಿತ್ರವನ್ನ ಹಿರಿಯೂರು ಮೂಲದ ಪ್ರಸನ್ನ ಕಿಚ್ಚ ಸುದೀಪ್ ನೀಡಿದ್ದಾರೆ. ಅಲ್ಲದೇ ವೀರಮದಕರಿ ನಾಯಕ ಸಿನಿಮಾ ಮಾಡುವಂತೆ ಕೂಡಾ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಿಸಿಎಲ್ ಕ್ರಿಕೆಟ್ ಪಂದ್ಯಾವಳಿ ಟ್ರೈನಿಂಗ್ ವೇಳೆ ಭಾವಚಿತ್ರ ನೀಡಿ ಗೌರವಿಸಿದ್ದು, ಕಿಚ್ಚನ ಭಾವಚಿತ್ರ ನೋಡಿ ಖುಷಿ ಪಟ್ಟಿದ್ದಾರೆ