ಹೊನ್ನಾವರ : ತಾಲೂಕಿನ ಮಂಕಿಯಲ್ಲಿ ಅರಬ್ಬಿ ಸಮುದ್ರದಲ್ಲಿ ಮುಳುಗಿ ಇಬ್ಬರು ಸಹೋದರರು ಸಾವಿಗೀಡಾದ ಘಟನೆ ನಡೆದಿದೆ ಮೃತರನ್ನು ವಿದ್ಯಾರ್ಥಿಗಳಾದ ಮದನ್ ನಾರಾಯಣ ಖಾರ್ವಿ (17) ಮತ್ತು ಸುಜನ್ ನಾರಾಯಣ ಖಾರ್ವಿ (15) ಎಂದು ಗುರುತಿಸಲಾಗಿದೆ.ಅವರು ತಮ್ಮ ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಆದರೆ ಮಂಕಿಯ ಮಡಿ ಸಮುದ್ರದ ದಡದಿಂದ ಅರಬ್ಬಿ ಸಮುದ್ರದಲ್ಲಿ ಸುಮಾರು 100 ಮೀಟರ್ ದೂರ ತೆರಳಿದ್ದ ವೇಳೆ ಬಲವಾದ ಸಮುದ್ರದ ಅಲೆಗಳಿಗೆ ಸಿಲುಕಿ ಅವರ ಪಾತಿ ದೋಣಿ ಮಗುಚಿದೆ. ಇದರಿಂದ ಇವರು ಸಮುದ್ರದಲ್ಲಿ ಮುಳುಗಿದರು. ಅಲೆಯ ರಭಸಕ್ಕೆ ಅವರಿಗೆ ಮೇಲೆ ಬರಲು ಸಾಧ್ಯವಾಗದೆ ಅವರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.