ಸಿರಗುಪ್ಪ: ರಾಷ್ಟ್ರೀಯ ಹೆದ್ದಾರಿ 150ಎ ಕಾಮಗಾರಿ ವಿಳಂಬ ಶಾಸಕ ಬಿ.ಎಂ ನಾಗರಾಜ ವೇದಿಕೆಯಲ್ಲಿ ವಿತ್ತ ಸಚಿವರಿಗೆ ಮನವಿ
ರಸ್ತೆ ಸರಿಪಡಿಸಲು ವೇದಿಕೆಯಲ್ಲೇ ಮನವಿ: ರಾಷ್ಟ್ರೀಯ ಹೆದ್ದಾರಿ 150ಎ ಕಾಮಗಾರಿ ವಿಳಂಬ ಕುರಿತು ಸಿರುಗುಪ್ಪ ಶಾಸಕ ಬಿ.ಎಂ ನಾಗರಾಜ ವೇದಿಕೆಯಲ್ಲಿ ಪ್ರಸ್ತಾಪಿಸಿದರು. ಧಡೇಸೂಗೂರಿನಿಂದ ಬಾಗೇವಾಡಿ ಹಾಗೂ ತೆಕ್ಕಲಕೋಟೆ ಮಾರ್ಗವಾಗಿ ಬರುವಾಗ ತಾವು ಸಮಸ್ಯೆಯನ್ನು ಗಮನಿಸಿದ್ದೀರಿ, ಆದ್ದರಿಂದ ಶೀರ್ಘವಾಗಿ ಕಾಮಗಾರಿ ಮುಗಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸುವಂತೆ ಮನವಿ ಮಾಡಿದರು. ಆದರೆ ವಿತ್ತ ಸಚಿವರು ವೇದಿಕೆಯಲ್ಲಿ ಯಾವುದೆ ಉತ್ತರ ನೀಡಲಿಲ್ಲ.