ಬಿಜೆಪಿಗರ ಮನೆ ರೇಡ್ ಮಾಡಿದರೆ ಕೋಟಿ ಕೋಟಿ ಮೌಲ್ಯದ ವಾಚ್ ಸಿಗುತ್ತವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರು ಬಿಜೆಪಿಗರಿಗೆ ತಿರುಗೇಟು ಕೊಟ್ಟಿದ್ದಾರೆ.ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಮಾತನಾಡಿರುವ ಅವರು ಸಿಎಂ,ಡಿಸಿಎಂ ತೊಟ್ಟಿರುವ ವಾಚ್ ಕುರಿತು ಚರ್ಚೆ ನಡೆಸಿರುವ ಹಿನ್ನೆಲೆಯಲ್ಲಿ ಅವರು ಬಿಜೆಪಿಗರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.ನಮ್ಮವರು ಕೇವಲ ನಲವತ್ತು,ಐವತ್ತು ಲಕ್ಷದ ವಾಚ್ ಕಟ್ಟಿದ್ದಾರೆ.ಬಿಜೆಪಿಗರು ಹೇಗೆ ಕಾಂಗ್ರೆಸ್ ನವರ ಮನೆ ರೇಡ್ ಮಾಡಿಸ್ತಾರೊ ಹಾಗೇ ಬಿಜೆಪಿಗರ ಮನೆ ರೇಡ್ ಮಾಡಿಸಲಿ,ಒಂದು ಕೋಟಿ ಎರಡು ಕೋಟಿ ಮೌಲ್ಯದ ವಾಚ್ ಸಿಗುತ್ತವೆ.ಕಳೆದ ಬಾರಿ ಈಶ್ವರಪ್ಪನವರ ಮನೆಯಲ್ಲಿ ನೋಟ್ ಎಣಿಸುವ ಮಶೀನ ಸಿಕ್ಕಿತ್ತು.ಇಂತಹ ಕೆಲಸ ಬಿಟ್ಟು ಬಿಜೆಪಿಗರು ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿ ಎಂದರು.