ಮಸ್ಕಿ: 15 ಅಡಿ ಎತ್ತರದ ಮಸ್ಕಿಯಲ್ಲಿ ತಲೆ ಎತ್ತಲಿದೆ ಅಶೋಕ ಸ್ತಂಭ
Maski, Raichur | Nov 19, 2025 ಪಟ್ಟಣದಲ್ಲಿ ಸಾಮ್ರಾಟ್ ಅಶೋಕನ ಶಿಲಾ ಶಾಸನ ಪತ್ತೆಯಾದ 110 ವರ್ಷಗಳ ನಂತರ ಬೃಹತ್ ಅಶೋಕನ ಸ್ತಂಭ ಹಾಗೂ ವೃತ್ತ ನಿರ್ಮಾಣಕ್ಕೆ ಮುಹೂರ್ತ ಕೂಡಿ ಬಂದಿದೆ. ಪಟ್ಟಣದ ನಾಲ್ಕು ರಸ್ತೆ ಕೂಡುವ ಈಗಿನ ಅಶೋಕ ವೃತ್ತದಲ್ಲಿಯೇ ಕಲ್ಲಿನ ಶಿಲೆಯಲ್ಲಿ ಬೃಹತ್ ಆಶೋಕ ಸ್ತಂಭ ನಿರ್ಮಾಣಕ್ಕೆ ಶಾಸಕರೂ ಆದ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಅವರು ಶಿಫಾರಸು ಮಾಡಿದ್ದರು. ಆದ ಕಾರಣ ಜಿಲ್ಲೆಯ ಖನಿಜ ಪ್ರತಿಷ್ಠಾನದ ನಾಲ್ಕನೇ ಹಂತದಲ್ಲಿ 50 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಮೊದಲ ಕಂತಾಗಿ 25 ಲಕ್ಷ ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ನಿತೀಶ.ಕೆ ಆದೇಶಿಸಿದ್ದಾರೆ.