ಕಾರವಾರ: ತಾಲ್ಲೂಕಿನ ಬಿಣಗಾ ದಲ್ಲಿ ಬಿರುಗಾಳಿ ಹಾಗೂ ಭಾರೀ ಮಳೆಗೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮವಾಗಿ ಹಲವು ವಾಹನಗಳು ಜಖಂಗೊಂಡಿದ್ದು, ಆಕಳೊಂದು ಸಾವನ್ನಪ್ಪಿದೆ.ಲಿಟಲ್ ಬಿಣಗಾ ನೇವಿ ಗೇಟ್ ಹೊರಭಾಗದಲ್ಲಿ ಘಟನೆ ನಡೆದಿದೆ. ಮರದ ಕೆಳಭಾಗದಲ್ಲಿ ಹಲವು ಬೈಕ್ ಗಳನ್ನ ನಿಲ್ಲಿಸಲಾಗಿತ್ತು. ಮಳೆಯಿಂದ ಆಶ್ರಯ ಪಡೆಯಲು ಆಕಳೊಂದು ಬಂದು ನಿಂತಿತ್ತು. ಈ ವೇಳೆ ಮಳೆ ಮತ್ತು ಬಿರುಗಾಳಿಗೆ ಮರ ತುಂಡಾಗಿ ಕೆಳಕ್ಕೆ ಬಿದ್ದಿದೆ. ಅಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಗಳು ಜಖಂಗೊಂಡಿವೆ.ನೌಕಾ ಸೇನೆಯ ಅಗ್ನಿಶಾಮಕ ಸಿಬ್ಬಂದಿಗಳು, ಪೊಲೀಸರು ಹಾಗೂ ಸ್ಥಳೀಯ ನಿವಾಸಿಗಳ ಸಹಕಾರ ದಲ್ಲಿ ಬಿದ್ದ ಮರವನ್ನು ತೆರವುಗೊಳಿಸಿದರು.