ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ನ.24 ರಿಂದ ನ.30ರವರೆಗೆ ಕನ್ನಡ ರಾಜ್ಯೋತ್ಸವ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾದಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು. ಶನಿವಾರ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ರಾಜ್ಯೋತ್ಸವದ ಸಪ್ತಾಹ ಕಾರ್ಯಕ್ರಮಕ್ಕೆ ನ.24ರಂದು ಚಾಲುಕ್ಯ ನಗರದ ಸಾಹಿತ್ಯ ಗ್ರಾಮದ ಕ.ಸಾ.ಪ. ಕೇಂದ್ರದಲ್ಲಿ ಉದ್ಘಾಟಿಸಲಾಗುವುದು. ನ.25ರಂದು ಭದ್ರಾವತಿಯಲ್ಲಿ ನ.26ರಂದು ತೀರ್ಥಹಳ್ಳಿಯಲ್ಲಿ ನ.27ರಂದು ಸೊರಬದಲ್ಲಿ , ನ.28ರಂದು ಶಿಕಾರಿಪುರದಲ್ಲಿ, ನ.29ರಂದು ಹೊಸನಗರದಲ್ಲಿ ಇದರ ಸಮಾರೋಪ ಸಮಾರಂಭ ನ.30ರಂದು ಸಾಗರದಲ್ಲಿ ನಡೆಯಲಿದೆ ಎಂದರು.