ಹುಬ್ಬಳ್ಳಿ : ಈ ದೇಶದಲ್ಲಿ ವೋಟ್ ಚೋರಿ ಆಗಿದ್ದು ಸತ್ಯ. ವಿಶ್ವಗುರು ಗೆಲ್ಲುವ ಸಿಸ್ಟಮ್ ಜಗತ್ತಿಗೆ ಬಯಲಾಗಿದೆ. ಮಾದರಿ ಚುನಾವಣೆ ಮಾಡಿ, ಇಡೀ ವ್ಯವಸ್ಥೆಯನ್ನ ಹಾಳು ಮಾಡಿದ್ದಾರೆ ಎಂದು ಪರೋಕ್ಷವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಮೋದಿ ಸಾಹೇಬರ ತಂತ್ರ ಜಗತ್ತಿಗೆ ಗೊತ್ತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾಗಿದೆ. ಬೇರೆಬೇರೆ ರಾಜ್ಯದಲ್ಲಿ ರೈತರ ಹೋರಾಟ ಮಾಡಿದ್ರೆ ದೇಶ ದ್ರೋಹಿಗಳೆಂದು ಅಂತಾರೆ. ದೆಹಲಿಯಲ್ಲಿ ರೈತರು ಹೋರಾಟ ಮಾಡಿ ಜೀವ ಕಳೆದುಕೊಂಡರೆ ಯಾವೊಬ್ಬ ಬಿಜೆಪಿ ನಾಯಕರು ತುಟಿ ಬಿಚ್ಚಲಿಲ್ಲ ಎಂದರು. ಕಾಂಗ್ರೆಸ್ ಅಧಿಕಾರ ಇರುವ ರಾಜ್ಯಗಳಲ್ಲಿ ಹೋರಾಟ ಆದ್ರೆ ದೊಡ್ಡದಾಗಿ ಮಾತನಾಡುತ್ತಿದ