ನಾಗಮಂಗಲ: ಪಟ್ಟಣದ ವಿವಿಧ ಪೊಲೀಸ್ ಠಾಣೆಯ ಪೊಲೀಸರಿಂದ ಏಕತೆಗಾಗಿ ಓಟ
ಸರದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನದ ಅಂಗವಾಗಿ ನಾಗಮಂಗಲ ಪೊಲೀಸ್ ಇಲಾಖೆಯು ಏಕತೆಗಾಗಿ ಓಟ ಎಂಬ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು. ಭಾರತದ ಏಕೀಕರಣದ ಶಿಲ್ಪಿ ಸರದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನದ ಅಂಗವಾಗಿ ಅಕ್ಟೋಬರ್ 31 ರಂದು ದೇಶಾಧ್ಯಂತ ರಾಷ್ಟ್ರೀಯ ಏಕತಾ ಓಟವನ್ನು ಆಚರಿಸಲಾಗುತ್ತಿದೆ. ಈ ಮಹತ್ವದ ದಿನದ ನಿಮಿತ್ತ ನಾಗಮಂಗಲ ಪೊಲೀಸ್ ಇಲಾಖೆಯು ಶುಕ್ರವಾರ ಏಕತೆಗಾಗಿ ಓಟ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ, ಬೆಳ್ಳೂರು ಪೊಲೀಸ್ ಠಾಣೆ, ಗ್ರಾಮಾಂತರ ಪೊಲೀಸ್ ಠಾಣೆ, ಮತ್ತು ಬಿಂಡಿಗನವಿಲೆ ಪೊಲೀಸ್ ಠಾಣೆಯ ಪೊಲೀಸರು ಸಿಬ್ಬಂದಿ ಹಾಗೂ ಅಧಿಕಾರಿಗಳು ಪಟ್ಟಣದಲ್ಲಿ ನಡೆದ ಏಕತಾ ಓಟದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು