ಬೆಂಗಳೂರು ಪೂರ್ವ: ʻಬ್ಲಾಕ್ಮೇಲ್ಗೆ ಹೆದರೋನಲ್ಲ ನಾನುʼ; ಗುತ್ತಿಗೆದಾರರ ಸಂಘದ ಆರೋಪಕ್ಕೆ ಡಿಕೆಶಿ ಖಡಕ್ ಪ್ರತಿಕ್ರಿಯೆ
ಬಾಕಿ ಬಿಡುಗಡೆ ಮಾಡದಿದ್ದರೆ, ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಗುತ್ತಿಗೆದಾರರ ಸಂಘಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಗುತ್ತಿಗೆದಾರರ ಜೊತೆ ಸಭೆ ಕರೆದಿದ್ದೇನೆ. ಅವರ ಜೊತೆ ಮಾತನಾಡ್ತಿನಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಶನಿವಾರ ಹೇಳಿದ್ದಾರೆ. ಕೆ.ಆರ್ ಪುರಂನ ಟಿಸಿ ಪಾಳ್ಯದ ವೆಂಗಯ್ಯ ಇಕೋ ಪಾರ್ಕ್ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಬ್ಲಾಕ್ಮೇಲ್ಗೆ ನಾನು ಹೆದರೋನಲ್ಲ. ಇವೆಲ್ಲ ಬಿಜೆಪಿ ಆಡಳಿತದ ಕಾಲದಲ್ಲಿ ನಡೆದ ಅನಾಹುತಗಳಿವು. ಲಂಚದ ಆರೋಪಗಳಿದ್ದರೆ, ಸೂಕ್ತ ಪುರಾವೆಗಳನ್ನು ತನ್ನಿ. ನಾನು ತಕ್ಷಣ ಕ್ರಮ ಕೈಗೊಳ್ಳುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.