ಆಳಂದ: ಸುಕ್ಷೇತ್ರ ಬೆಳಮಗಿಯಲ್ಲಿ ಜಾತ್ರಾ ಮಹೋತ್ಸವ: ನಿರಗುಡಿ ಹವಾ ಮಲ್ಲಿನಾಥರ ತುಲಾಬಾರ
ಆಳಂದ ತಾಲೂಕಿನ ಸುಕ್ಷೇತ್ರ ಬೆಳಮಗಿ ಗ್ರಾಮದಲ್ಲಿ ಇಂದು ಶ್ರೀ ದೇವಿಲಿಂಗ ಮಲ್ಲಿನಾಥ ಆಶ್ರಮದ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು. ಪೂಜ್ಯ ಹವಾ ಮಲ್ಲಿನಾಥ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮವು ವಿಶೇಷ ವೈಭೋಗದಲ್ಲಿ ನಡೆಯಿತು. ಭಕ್ತರು ದರ್ಶನಕ್ಕೆ ಆಗಮಿಸಿ ಪರಮ ಪೂಜ್ಯರಿಂದ ದರ್ಶನ-ಆಶೀರ್ವಾದ ಪಡೆದು ಪುನಿತರಾದರು. ಭಕ್ತರು ಪೂಜ್ಯ ಹವಾ ಮಲ್ಲಿನಾಥ ಮಹಾರಾಜಾರ ತುಲಾಭಾರ ಸೇವೆಯನ್ನು ಸಲ್ಲಿಸಿದರು.