ಚಿಂಚೋಳಿ: ಗಂಡ ಅತ್ತೆಯ ಕಿರುಕುಳ, ಗಂಡನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ: ಚಿಂಚೋಳಿಯಲ್ಲಿ ಘಟನೆ
ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ತವರಿನಿಂದ ಹಣ ಹಾಗೂ ಚಿನ್ನ ತರುವಂತೆ ಪೀಡಿಸುತ್ತಿದ್ದ ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 23 ವರ್ಷದ ಗಿರೀಜಾ ಮೃತ ಮಹಿಳೆ. ಚಿಂಚೋಳಿಯಲ್ಲಿರುವ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಿರೀಜಾ ಮತ್ತು ಆಕೆಯ ಗಂಡ ಮಲ್ಲಿಕಾರ್ಜುನ ಜನವರಿ 8, 2014ರಂದು ವಿವಾಹವಾಗಿದ್ದರು. ವಿವಾಹದ ನಂತರದಲ್ಲಿ ಗಂಡ ಹಾಗೂ ಅತ್ತೆ ಹಣ ಮತ್ತು ಚಿನ್ನಕ್ಕಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ಸಹೋದರ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಗಂಡನಾದ ಮಲ್ಲಿಕಾರ್ಜುನನನ್ನು ವಶಕ್ಕೆ ಪಡೆದಿದ್ದಾರೆ. ಘಟ