ತೀರ್ಥಹಳ್ಳಿ: ಪಟ್ಟಣದಲ್ಲಿ ಏಕತಾ ನಡಿಗೆಗೆ ಸಂಸದ ಬಿ ವೈ ಆರ್ ಚಾಲನೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನದ ಹಿನ್ನೆಲೆ ಕೇಂದ್ರ ಸರ್ಕಾರದ ಯುವ ಮತ್ತು ಕ್ರೀಡಾ ಸಚಿವಾಲಯ ಆಯೋಜಿಸಿರುವ ಏಕತಾ ನಡಿಗೆಗೆ ಗುರುವಾರ ಸಂಸದ ಬಿ ವೈ ರಾಘವೇಂದ್ರ ಚಾಲನೆ ನೀಡಿದರು. ಏಕತಾ ನಡಿಗೆಯಲ್ಲಿ ಯುವಕರು, ಶಾಲಾ ಮಕ್ಕಳು ಸೇರದಂತೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಈ ತೀರ್ಥಹಳ್ಳಿಯ ಶಾಸಕ ಆರದ ಜ್ಞಾನೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.