ಬೆಂಗಳೂರು ಪೂರ್ವ: ನಡು ರಸ್ತೆಯಲ್ಲಿ ಯುವಕರಿಬ್ಬರ ಮಾರಾಮಾರಿ, ಹೆಣ್ಣೂರು ವ್ಯಾಪ್ತಿಯಲ್ಲಿ ಘಟನೆ
ಇಬ್ಬರು ಯುವಕರು ರಸ್ತೆಯಲ್ಲಿ ಬಡಿದಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು,ಮೈ ಕೈನಲ್ಲಿ ರಕ್ತ ಬರುತ್ತಿದ್ದರು ಒಬ್ಬರ ಮೇಲೊಬ್ಬರು ಬಿದ್ದು ಗುದ್ದಾಡುತ್ತಿರುವ ದೃಶ್ಯಗಳು ಸ್ಥಳಿಯರ ಮೊಬೈಲ್ ಫೋನ್ಗಳಲ್ಲಿ ಸೆರೆಯಾಗಿವೆ. ಬಡಿದಾಡಿಕೊಂಡವರ ಪೈಕಿ ಓರ್ವ ಯುವಕ ಎಎಸ್ಐಯೊಬ್ಬರ ಪುತ್ರ ಎನ್ನಲಾಗಿದ್ದು, ಯುವತಿಯ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ರಸ್ತೆಯಲ್ಲೇ ಹೊಡೆದಾಡುತ್ತಿದ್ದರೂ ಯಾರೂ ಸಹ ಬಿಡಿಸುವ ಯತ್ನ ಮಾಡದಿರುವುದು ವಿಪರ್ಯಾಸ. ಘಟನೆಯ ಕುರಿತು ಸೆಪ್ಟೆಂಬರ್ 18ರಂದು ಬೆಳಿಗ್ಗೆ 10 ಗಂಟೆಗೆ ಮಾಹಿತಿ ನೀಡಿದ ಹೆಣ್ಣೂರು ಪೊಲೀಸರು 'ಸದ್ಯ ಇಬ್ಬರಿಂದಲೂ ದೂರು, ಪ್ರತಿ ದೂರು ಪಡೆದು ವಿಚಾರಣೆ ನಡೆಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.