ಬೆಂಗಳೂರು ದಕ್ಷಿಣ: ಜಯನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು-ಪೊಲೀಸ್ರ ನಡುವೆ ಗಲಾಟೆ
ಜಯನಗರ ಶಾಸಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯ್ತು.. ಮೇ 9ರಂದು ಸಂಜೆ 6ಗಂಟೆ ಸುಮಾರಿಗೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಜಯನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ್ರು.. ಪ್ರತಿಭಟನೆ ವೇಳೆ ಶಾಸಕ ರಾಮಮೂರ್ತಿ ಪ್ರತಿಕೃತಿ ದಹನಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ರು.. ಈ ವೇಳೆ ಅದನ್ನ ತಡೆದ ಪೊಲೀಸ್ರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ತಳ್ಳಾಡಿ ವಾಗ್ವಾದ ನಡೆಸಿದ್ರು.. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸ್ರ ಮಧ್ಯೆ ಜಗಳ ಆಯ್ತು.. ಜಗಳ ಗಂಭೀರ ಸ್ವರೂಪ ಪಡೀತಿದ್ದಂತೆಯೇ ಎಲ್ಲರನ್ನೂ ಪೊಲೀಸ್ರು ವಶಪಡೆದ್ರು..