ದ್ವೇಷ ಭಾಷಣ ಎಚ್ಚರಿಕೆ ಗಂಟೆಯಾಗಲಿದೆ ಎಂದು ಸಚಿವ ಎಚ ಕೆ ಪಾಟೀಲ್ ಅವರು ಹೇಳಿದರು. ಸಮಾಜದ ಸ್ವಾಸ್ಥ್ಯ ರಕ್ಷಣೆಗಾಗಿ ಈ ಮಸೂದೆಗೆ ಬೆಂಬಲ ನೀಡಬೇಕು ಮತ್ತು ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಬಲ ತುಂಬಲು ಕಾನೂನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು. ಮಂಗಳವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಸಮಾಜದಲ್ಲಿ ಶಾಂತಿ ಕಾಪಾಡುವ ಮತ್ತು ಅಶಾಂತಿ ಸೃಷ್ಟಿಸುವ, ದ್ವೇಷ ಬಿತ್ತುವವರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ದ್ವೇಷ ಭಾಷಣ ತಡೆ ಮಸೂದೆ ತರಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಅವರು ಹೇಳಿದರು