ಮೊಳಕಾಲ್ಮುರು :-ತಾಲ್ಲೂಕು ತುಮಕೂರ್ಲಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲಾ ಆವರಣದಲ್ಲಿ ಕ್ಲಸ್ಟರ್ ಮಟ್ಟದ F L N ಕಲಿಕಾ ಹಬ್ಬ2025-2026 ಕ್ಷೇತ್ರ ಶಿಕ್ಷಣ ಇಲಾಖೆ ಮೊಳಕಾಲ್ಮುರು ಸಮೂಹ ಸಂಪನ್ಮೂಲ ಕೇಂದ್ರ ಬಿಜಿಕೆರೆ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು ಇನ್ನು ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಕರಾದ ರಾಮಚಂದ್ರಪ್ಪ ಮಾತನಾಡಿ ಕಲಿಕಾ ಹಬ್ಬವು ಜನವರಿಯಲ್ಲಿ ಆರಂಭವಾಗಿ ಅನೇಕ ಶಾಲೆಗಳಲ್ಲಿ ಪೂರ್ಣಗೊಂಡಿದೆ. ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲು ಮತ್ತು ಒತ್ತಡವಿಲ್ಲದ ಕಲಿಕೆಗೆ ಇದು ಸಹಕಾರಿಯಾಗಿದೆ ಸ್ಥಳೀಯ ಕಲೆಗಳು, ಜನಪದ ಹಾಡುಗಳು ಮತ್ತು ಕಥೆಗಳಿಗೆ ಈ ಹಬ್ಬದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದರು.