ಕುಮಟಾ: ಕುಡ್ಲೆ ಬೀಚನಲ್ಲಿ ಸಮುದ್ರಪಾಲಾಗುತ್ತಿದ್ದ ಇಬ್ಬರ ರಕ್ಷಣೆ
ಕುಮಟಾ :ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್ ನಲ್ಲಿ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಣಾ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ನಡೆದಿದೆ. ಬೆಂಗಳೂರು ಮೂಲದ ಗಣೇಶ್ ಕೃಷ್ಣಪ್ಪ ಸುಬ್ರಹ್ಮಣ್ಯ ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದು ,ಬೆಂಗಳೂರಿನಿಂದ 9 ಜನ ಪ್ರವಾಸಿಕ್ಕೆ ಕುಮಟಾ ತಾಲೂಕಿನ ಕುಡ್ಲೆ ಬೀಚ್ ಬಂದಿದ್ದರು. ನೀರಿಗಿಳಿದಾಗ ಅಲೆಯ ಹೊಡೆತಕ್ಕೆ ಇಬ್ಬರು ತೇಲಿ ಹೋಗಿದ್ದರು. ರಕ್ಷಣೆಗಾಗಿ ಕೂಗಿಕೊಂಡಾಗ ಜೀವ ರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಎಸ್ .ಕುರ್ಲೆ, ಮಂಜು ಹರಿಕಾಂತ್, ಪ್ರವಾಸಿ ಮಿತ್ರ ಶೇಖರ್ ಹರಿಕಾಂತ್, ಮೈ ಸ್ಟಿಕ್ ಅನ್ವೆಂಚರ್ ತಂಡದಿಂದ ತಕ್ಷಣ ರಕ್ಷಣೆ ಮಾಡಿದ್ದಾರೆ. ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.