ಯಲ್ಲಾಪುರ: ಪಟ್ಟಣದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಯಿಂದ ಜಿಎಸ ಟಿ ಜಾಗೃತಿ ಜಾಥಾ
ಯಲ್ಲಾಪುರ: ಪಟ್ಟಣದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕರ್ತರ ತಂಡದೊಂದಿಗೆ ಜಿಎಸ ಟಿ ಜಾಗೃತಿ ಜಾಥಾದ ಅಂಗವಾಗಿ ಮಾರುಕಟ್ಟೆ ರಸ್ತೆ ಯಲ್ಲಿರುವ ಔಷಧಿ,ಕಿರಾಣಿ ,ವ್ಯಾಪಾರ ಮಳಿಗೆಗಳಿಗೆಹಾಗೂ ದ್ವಿಚಕ್ರ ವಾಹನಗಳ ಶೋರೂಮ್ಗಳಿಗೆ ಭೇಟಿ ನೀಡಿದರು.ಕೇಂದ್ರದ ಮೋದಿ ಸರ್ಕಾರವು ಹಲವು ಉತ್ಪನ್ನಗಳ ಮೇಲಿನ ಜಿ.ಎಸ್.ಟಿ (ಸರಕು ಮತ್ತು ಸೇವಾ ತೆರಿಗೆ) ದರಗಳನ್ನು ಇಳಿಸಿರುವ ಕುರಿತು ಮಾಹಿತಿ ನೀಡಿವ್ಯಾಪಾರಿಗಳೊಂದಿಗೆ ಸಂವಾದ ನಡೆಸಿ, ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ತಿಳಿಸಿದರಲ್ಲದೇವ್ಯಾಪಾರಿಗಳಿಗೆ, ದರ ಕಡಿತದ ಪ್ರಯೋಜನ ಸಂಪೂರ್ಣವಾಗಿ ಜನಸಾಮಾನ್ಯರಿಗೆ ತಲುಪಬೇಕು ಎಂದರು.